Apple ಖಾತೆ
App Store, Apple Music, iCloud, FaceTime, iTunes Store ಮತ್ತು ಹೆಚ್ಚಿನವುಗಳಂತಹ Apple ಸೇವೆಗಳನ್ನು ಆ್ಯಕ್ಸೆಸ್ ಮಾಡಲು ನಿಮ್ಮ Apple ಖಾತೆಯನ್ನು ನೀವು ಬಳಸುತ್ತೀರಿ.
ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಲು, ನಿಮ್ಮ ಖಾತೆಯಲ್ಲಿ ದಾಖಲಾಗಿರುವ ಈಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಬಳಸಿ. ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನಿಮ್ಮ Apple ಖಾತೆಯ ಪ್ರಾಥಮಿಕ ಬಳಕೆದಾರರ ಹೆಸರನ್ನಾಗಿ ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.
ಯಾವುದೇ ಸಾಧನದಲ್ಲಿ ಯಾವುದೇ Apple ಸೇವೆಯನ್ನು ಬಳಸಲು ಒಂದೇ Apple ಖಾತೆಗೆ ಸೈನ್ ಇನ್ ಮಾಡಿ. ಆ ರೀತಿಯಲ್ಲಿ, ನೀವು ಒಂದು ಸಾಧನದಲ್ಲಿ ಖರೀದಿಗಳನ್ನು ಮಾಡಿದಾಗ ಅಥವಾ ಐಟಂಗಳನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಇತರ ಸಾಧನಗಳಲ್ಲಿ ಅದೇ ಐಟಂಗಳು ಲಭ್ಯವಿರುತ್ತವೆ. ನಿಮ್ಮ ಖರೀದಿಗಳನ್ನು ನಿಮ್ಮ Apple ಖಾತೆಗೆ ಲಿಂಕ್ ಮಾಡಲಾಗಿರುತ್ತದೆ ಮತ್ತು ಬೇರೆ Apple ಖಾತೆಗೆ ವರ್ಗಾಯಿಸಲು ಸಾಧ್ಯವಿಲ್ಲ.
ನಿಮ್ಮದೇ ಆದ Apple ಖಾತೆಯನ್ನು ಹೊಂದಿರುವುದು ಮತ್ತು ಅದನ್ನು ಹಂಚಿಕೊಳ್ಳದಿರುವುದು ಉತ್ತಮ. ನೀವು ಕುಟುಂಬದ ಗುಂಪಿನ ಭಾಗವಾಗಿದ್ದರೆ, Apple ಖಾತೆಯನ್ನು ಹಂಚಿಕೊಳ್ಳದೆಯೇ ನೀವು ಕುಟುಂಬ ಸದಸ್ಯರ ನಡುವೆ ಖರೀದಿಗಳನ್ನು ಹಂಚಿಕೊಳ್ಳಲು ಕುಟುಂಬ ಹಂಚಿಕೆಯನ್ನು ಬಳಸಬಹುದು.
Apple ಖಾತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, Apple ಖಾತೆ ಬೆಂಬಲ ಪುಟವನ್ನು ನೋಡಿ. Apple ಖಾತೆಯೊಂದನ್ನು ರಚಿಸಲು, Apple ಖಾತೆ ವೆಬ್‌ಸೈಟ್ಗೆ ಹೋಗಿ.