ಎರಡು-ಅಂಶದ ದೃಢೀಕರಣ
iOS 13.4, iPadOS 13.4, macOS 10.15.4 ಅಥವಾ ನಂತರದ ಆವೃತ್ತಿಗಳನ್ನು ಹೊಂದಿರುವ ಸಾಧನದಲ್ಲಿ ನಿಮ್ಮ Apple ಖಾತೆಯನ್ನು ನೀವು ರಚಿಸಿದ್ದರೆ, ನಿಮ್ಮ ಖಾತೆಯು ಸ್ವಯಂಚಾಲಿತವಾಗಿ ಎರಡು-ಅಂಶದ ದೃಢೀಕರಣವನ್ನು ಬಳಸುತ್ತದೆ.
Apple ಖಾತೆಗೆ ಎರಡು ಅಂಶದ-ದೃಢೀಕರಣವು iOS 9, iPadOS 13, OS X 10.11 ಅಥವಾ ನಂತರದ ಆವೃತ್ತಿಗಳಲ್ಲಿ ಲಭ್ಯವಿದೆ. ನೀವು ಈ ಹಿಂದೆ ಎರಡು-ಅಂಶದ ದೃಢೀಕರಣವಿಲ್ಲದೆಯೇ Apple ಖಾತೆಯನ್ನು ರಚಿಸಿದ್ದರೆ, ಎರಡು ಅಂಶದ ದೃಢೀಕರಣವನ್ನು ಆನ್ ಮಾಡಲು ಈ ಹಂತಗಳನ್ನು ಅನುಸರಿಸಿ:
ಸೆಟ್ಟಿಂಗ್ಸ್ ಆ್ಯಪ್
> [ನಿಮ್ಮ ಹೆಸರು] > ಸೈನ್-ಇನ್ ಮತ್ತು ಭದ್ರತೆ ಎಂಬಲ್ಲಿಗೆ ಹೋಗಿ.
ಎರಡು-ಅಂಶದ ದೃಢೀಕರಣವನ್ನು ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.
ಎರಡು-ಅಂಶದ ದೃಢೀಕರಣವು ಇತರರು ನಿಮ್ಮ Apple ಖಾತೆಯನ್ನು (ಅವರು ನಿಮ್ಮ Apple ಖಾತೆಯ ಪಾಸ್‌ವರ್ಡ್ ಅನ್ನು ತಿಳಿದಿದ್ದರೂ) ಆ್ಯಕ್ಸೆಸ್ ಮಾಡದಂತೆ ತಡೆಯುತ್ತದೆ ಹಾಗೂ iOS, iPadOS ಮತ್ತು macOSನ ಕೆಲವು ಫೀಚರ್‌ಗಳಿಗೆ ಎರಡು-ಅಂಶದ ದೃಢೀಕರಣದ ಭದ್ರತೆಯ ಅಗತ್ಯವಿರುತ್ತದೆ. ಎರಡು-ಅಂಶದ ದೃಢೀಕರಣವು ಆನ್ ಆಗಿರುವಾಗ, ವಿಶ್ವಾಸಾರ್ಹ ಸಾಧನವನ್ನು ಬಳಸಿಕೊಂಡು ನೀವು ಮಾತ್ರ ನಿಮ್ಮ ಖಾತೆಯನ್ನು ಆ್ಯಕ್ಸೆಸ್ ಮಾಡಬಹುದು. ನೀವು ಮೊದಲ ಬಾರಿಗೆ ಹೊಸ ಸಾಧನಕ್ಕೆ ಸೈನ್ ಇನ್ ಮಾಡಿದಾಗ, ನೀವು ಎರಡು ಮಾಹಿತಿಯ ಅಂಶಗಳನ್ನು ಒದಗಿಸಬೇಕಾಗುತ್ತದೆ-ನಿಮ್ಮ Apple ಖಾತೆಯ ಪಾಸ್‌ವರ್ಡ್ ಮತ್ತು ನಿಮ್ಮ ಫೋನ್ ಸಂಖ್ಯೆಗೆ ಸ್ವಯಂಚಾಲಿತವಾಗಿ ಕಳುಹಿಸಲಾಗುವ ಅಥವಾ ನಿಮ್ಮ ವಿಶ್ವಾಸಾರ್ಹ ಸಾಧನಗಳಲ್ಲಿ ಪ್ರದರ್ಶಿಸಲಾಗುವ ಆರು-ಅಂಕಿಗಳ ದೃಢೀಕರಣ ಕೋಡ್. ಕೋಡ್ ಅನ್ನು ನಮೂದಿಸುವ ಮೂಲಕ, ನೀವು ಹೊಸ ಸಾಧನದ ಮೇಲೆ ವಿಶ್ವಾಸವಿರಿಸಿದ್ದೀರಿ ಎಂದು ದೃಢೀಕರಿಸುತ್ತೀರಿ.