ಕುಟುಂಬ ಹಂಚಿಕೆ ಸದಸ್ಯರ ಪ್ರಕಾರಗಳು

ಕುಟುಂಬ ಹಂಚಿಕೆ ಗುಂಪಿನ ಸದಸ್ಯರು ತಮ್ಮ ವಯಸ್ಸಿನ ಆಧಾರದ ಮೇಲೆ ವಿಭಿನ್ನ ಪಾತ್ರಗಳನ್ನು ಹೊಂದಬಹುದು.

ಗಮನಿಸಿ: ಯಾರನ್ನೇ ವಯಸ್ಕರು ಅಥವಾ ಮಗು ಎಂದು ಪರಿಗಣಿಸುವ ವಯಸ್ಸು ದೇಶ ಅಥವಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ.

  • ವ್ಯವಸ್ಥಾಪಕರು: ಕುಟುಂಬ ಹಂಚಿಕೆ ಗುಂಪನ್ನು ಸೆಟಪ್ ಮಾಡುವ ಒಬ್ಬ ವಯಸ್ಕರು. ವ್ಯವಸ್ಥಾಪಕರು ಕುಟುಂಬದ ಸದಸ್ಯರನ್ನು ಆಹ್ವಾನಿಸಬಹುದು, ಕುಟುಂಬದ ಸದಸ್ಯರನ್ನು ತೆಗೆದುಹಾಕಬಹುದು ಮತ್ತು ಗುಂಪನ್ನು ವಿಸರ್ಜಿಸಬಹುದು.

  • ವಯಸ್ಕರು: 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ‘ಕುಟುಂಬ ಹಂಚಿಕೆ’ ಗುಂಪಿನ ಸದಸ್ಯರು.

  • ಪೋಷಕರು/ಪಾಲಕರು: ಕುಟುಂಬ ಹಂಚಿಕೆ ಗುಂಪಿನ ಮಕ್ಕಳಿಗಾಗಿ ಪೋಷಕರ ನಿಯಂತ್ರಣಗಳನ್ನು ನಿರ್ವಹಿಸಲು ಸಹಾಯ ಮಾಡಬಲ್ಲ ಗುಂಪಿನಲ್ಲಿರುವ ವಯಸ್ಕರ ಸದಸ್ಯರು. ವ್ಯವಸ್ಥಾಪಕರು ಒಬ್ಬ ವಯಸ್ಕರನ್ನು ಕುಟುಂಬ ಹಂಚಿಕೆ ಗುಂಪಿಗೆ ಸೇರಿಸಿದಾಗ, ಗುಂಪಿನಲ್ಲಿ ಮಗು ಅಥವಾ ಹದಿಹರೆಯದ ಸದಸ್ಯರು ಇದ್ದರೆ, ಅವರು ಆ ವಯಸ್ಕರನ್ನು ಪೋಷಕರು ಅಥವಾ ಪಾಲಕರಾಗಿ ನೇಮಿಸಬಹುದು.

  • ಮಗು ಅಥವಾ ಹದಿಹರೆಯದವರು: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ‘ಕುಟುಂಬ ಹಂಚಿಕೆ’ ಗುಂಪಿನ ಸದಸ್ಯರು. ತಮ್ಮದೇ ಆದ Apple ಖಾತೆಯನ್ನು ರಚಿಸಲು ತುಂಬಾ ಚಿಕ್ಕ ವಯಸ್ಸಿನವರಾದ ಮಕ್ಕಳಿಗಾಗಿ ವ್ಯವಸ್ಥಾಪಕರು, ಪೋಷಕರು ಅಥವಾ ಪಾಲಕರು ಅದನ್ನು ರಚಿಸಿಕೊಡಬಹುದು. ನಿಮ್ಮ ಮಗುವಿಗಾಗಿ Apple ಖಾತೆಯೊಂದನ್ನು ರಚಿಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.